ವರ್ಷಗಳು ಮುಸುಕಾಗಬಹುದು, ಮೈಲಿಗಳು ಬೆಳೆಯಬಹುದು,
ಆದರೆ ಸ್ನೇಹದಬೇರುಗಳು ಹರಡಲು ಪ್ರಾರಂಭಿಸುತ್ತವೆ.
ಪರಿಚಿತ ಮುಖ, ಬೆಚ್ಚಗಿನ ಅಪ್ಪುಗೆ,
ಈ ಸಮಯ ಮತ್ತು ಸ್ಥಳವನ್ನು,
ಪುರ್ನಮಿಲನಗಳು ತುಂಬುತ್ತವೆ.....
ಕೂಡಿ ಕಲೆತ ಗೆಳೆಯ ಗೆಳತಿಯರು,
ಬರಲು ಮತ್ತೆ ನನ್ನೆದುರು,
ಮನದಲ್ಲಿ ಬಾವಗಳ ಪ್ರವಾಹ ಉಕ್ಕಿರಲು,
ನೆನಪಾಗುತ್ತಿದೆ ಇವರೊಡನೆ ಕಳೆದಕ್ಷಣಗಳು.....
ಹಗಲು ರಾತ್ರಿ ಕಾಡುತಿತ್ತು ಗುರಿಯೊಂದು ನನ್ನಮುಂದೆ,
ಅದನ್ನುಈಡೇರಿಸಲು ನಿಂತಿದ್ದರು ಗುರುಗಳು
ಬೆನ್ನೆಲುಬಾಗಿ ನನ್ನ ಹಿಂದೆ.....
ಕೆಲಮೊಮ್ಮೆ ಅವರು ಹಾಕಿದ ನಿಯಮಗಳಿದ್ದವು ಕಟ್ಟುನಿಟ್ಟು,
ಬಹುಶಃ ಅವುಗಳೇ ಆಗಿದ್ದವು ನಮ್ಮ ಯಶಸ್ವಿನ ಗುಟ್ಟು.....
ಓದಿನ ಒತ್ತಡ ಬಿಸಿಲಿನಂತೆ ಸುಡಲು,
ಸ್ನೇಹಿತರ ಸಂಘವಾಗಿತ್ತು ಮರದ ನೆರಳು.
ಜೊತೆಯಾಗಿ ಅವರ ಜೊತೆ ಕಾಲ ಕಳೆಯಲು,
ತೆಗೆಯುತಿತ್ತು ಹೃದಯ ಸಂತೋಷದ ಬಾಗಿಲು.....
ಮನೆಯವರ ನೆನಪು ಎದೆಯಲ್ಲಿ ಸುರಿಯುತಿತ್ತು, ಆಗಿ ಬಾರಿ ಮಳೆ,
ಅದನ್ನು ಸೊನೆ ಮಾಡಿತ್ತು, ಸ್ನೇಹದಮೋಡದ ಸೆಳೆ,
ಚಿಗುರೊಡೆಯುತ್ತ ಮನದಲ್ಲಿ ನೆಮ್ಮದಿಯ ಬೆಳೆ,
ಮುಖದಲ್ಲಿಅರಳಿತು ಉಲ್ಲಾಸದ ಕಳೆ.....
ಕೆಲವೊಮ್ಮೆ ಕ್ಷೀಣ ಮಾಡುತಿತ್ತು ಅನಾರೋಗ್ಯ,
ಕೊರೆಯುವ ಚಳಿಯ ಹಾಗೆ,
ಸ್ನೇಹಿತರ ಉಪಚಾರ ಸುರಿಸುತಿತ್ತು ಬೆಚ್ಚನೆಯ ಅಪ್ಪುಗೆ,
ಮನೆಯ ಊಟ ಇರದೆ, ತುಂಬದೆ ಇರುವ ಹೊಟ್ಟೆಯ ಗುಸುಗುಸು,
ಹೃದಯತುಂಬಿಹೊಗುತಿತ್ತು ಕೇಳಿ ಇವರ ಮೂತು ಸೊಗಸು.....
ಮತ್ತೆ ಚಿನ್ನದ ಕೀಲುಗಳ ಮೇಲೆ ನೆನಪಿನ ದ್ವಾರ ತೂಗಾಡುತ್ತಿದೆ,
ನನ್ನ ಹೃದಯವು ತೋಟಕ್ಕೆ ಹೋಗಿ,
ಹಳೆಯ ವಸ್ತುಗಳೊಂದಿಗೆ ನಡೆಯುತ್ತಿದೆ.....
ಜೀವನವು ನಮಗೆ ಇನ್ನೊಬ್ಬರೊಂದಿಗೆ ಸಂಕ್ಷಿಪ್ತ ಕ್ಷಣಗಳನ್ನು ನೀಡುತ್ತದೆ,
ಕೆಲಮೊಮ್ಮೆ ಆ ಅಲ್ಪಕ್ಷಣಗಳಲ್ಲಿ ನಮಗೆ ಜೀವಮಾನವಿಡೀ,
ಉಳಿಯುವ ನೆನಪುಗಳು ಸಿಗುತ್ತವೆ.....
ಸಮಯದ ಜೋಕಾಲಿಯಲ್ಲಿ ತೂಗಿದ ಅದೆಷ್ಟೋ ನೆನಪು,
ಕೆಲವೊಂದು ನಗುವಿನಲ್ಲಿ ಪುಟಿದೆದ್ದರೆ, ಕೆಲವು ಅಶ್ರುವಿನಲ್ಲಿ!!!!
ʻʻವರ್ಷಗಳನ್ನು ಎಣಿಸಬೇಡಿ..... ನೆನಪುಗಳನ್ನು ಎಣಿಸಿʼʼ
Associate Professor
Sapthagiri Institute of Medical Sciences & Research Centre