ಕನಸಿದು ಕನವರಿಕೆಯಿದು
ಕಾಡುವ ಕಾವ್ಯವಿದು
ಕಾರ್ಮೋಡ ಕವಿದರು
ಒಲುಮೆಯಿಂದ ಚಿಮ್ಮುವ ಕಾರಂಜಿಯಂತೆ
ನಿರ್ಮಲವಿದು ನಿಸ್ವಾರ್ಥವಿದು
ನಿತ್ಯ ನೂತನ ಭಾವವಿದು
ನಿಯಮಗಳಿಲ್ಲದ ಪಂದ್ಯದಂತೆ
ನಿರ್ಬಂಧ ವಿಲ್ಲದ ಸಾಗರದಂತೆ
ಪ್ರಾರ್ಥನೆಯಿದು ಪ್ರೇರಣೆಯಿದು
ಅಂತ್ಯವಿಲ್ಲದ ಪ್ರೇಮ ಬಿಂದು
ಅಮ್ಮನ ಮಡಿಲಲ್ಲಿ ಸಿಗುವ ಅಳಿಯದ ಪ್ರೀತಿಯಿದು
ಚೌಕಟ್ಟಿಲ್ಲದೆ ಪಸರಿಸುವ ಪವನದಂತೆ..
Resident
Belagavi Institute of Medical Sciences