ಪ್ರೀತಿಯ ಆ ದಿನಗಳ ನೆನೆಯಲು
ಸವಿನೆನೆಪುಗಳು ಮರುಕಳಿಸಲು
ಕಣ್ಣುಗಳು ತಾನಾಗಿಯೇ ತುಂಬಿಕೊಂಡವು...
ಕರುಳಬಳ್ಳಿಯನಿಡಿದೆನ್ನ ಕಂದ
ಹೊರಬರುವಾಗ ಎನಗಾದ ಆನಂದ
ಕಣ್ಣುಗಳು ತಾನಾಗಿಯೇ ತುಂಬಿಕೊಂಡವು...
ಆಡಿಕೊಂಡಿದ್ದ ಪುಟ್ಟಿ ಜ್ವರದಿ ನರಳುತಿರಲು
ಮಡಿಲಲ್ಲಿ ಮಲಗಿಸಿ ಚುಚ್ಚುಮದ್ದು ಕೊಡಿಸುತಿರಲು
ಕಣ್ಣುಗಳು ತಾನಾಗಿಯೇ ತುಂಬಿಕೊಂಡವು...
ಆಟಪಾಠದಿ ಗೆದ್ದು, ಮನೆ, ಶಾಲೆಯ ಕೀರ್ತಿ ಹೆಚ್ಚಿಸಲು
ವೇದಿಕೆಯ ಮೇಲೆ ನಿಂತು ಹೆತ್ತವರ ನೆನೆಯಲು
ಕಣ್ಣುಗಳು ತಾನಾಗಿಯೇ ತುಂಬಿಕೊಂಡವು...
ಮುದ್ದುಮಾಡಿದ ಅವ್ವನ ಅಪ್ಪನ ಪ್ರೀತಿಯ ನೆನೆದು
ಮಗಳು ಮದುವೆಮನೆಯಲಿ ಅಳುವ ತಡೆಯಲು
ಕಣ್ಣುಗಳು ತಾನಾಗಿಯೇ ತುಂಬಿಕೊಂಡವು...
ವೃದ್ದಾಪ್ಯ ಜೀವನದಿ,ಮಡದಿಯೊಡೆನೆ ಕುಳಿತಿರಲು
ಈ ಎಲ್ಲ ನೆನೆಪುಗಳ ಮೆಲುಕು ಹಾಕುತಿರಲು
ಕಣ್ಣುಗಳು ತಾನಾಗಿಯೇ ತುಂಬಿಕೊಂಡವು...
Professor
Adichunchanagiri Institute of Medical Sciences