ಕೆಮ್ಮು ದಮ್ಮು ಕಫಗಳಿರಲು
ಹಸಿವಾಗದೆ ತೂಕ ಇಳಿದಿರಲು
ಸೊಣಕಲು ಮೈ ಬೆವರುತಿರಲು
ಇರುಳು ಜ್ವರವು ಬರುತಿರಲು
ಕ್ಷಯವಿರುವ ಸಂಭವ ನಿಮಗೆ
ಬನ್ನಿರಿ ಗೆಳೆಯರೇ ಆಸ್ಪತ್ರೆಗೆ
ಮರೆಯದಿಂದೆ ಕಫದ ಪರೀಕ್ಷೆಗೆ
ಉಚಿತ ಖಚಿತವಿರುವ ಚಿಕಿತ್ಸೆಗೆ
ಸಾಂಕ್ರಮಿಕ ರೋಗವಿದಕಿರಲಿ ಗಮನ
ಶಾಪವಲ್ಲವಿದು, ಔಷಧವೆ ಉಪಶಮನ
**ಗುಲಾಬಿ ಕಡ್ಡಿಗಳಾಗುವವೆಲ್ಲ ದಮನ
ರಾಬರ್ಟ ಕಾಚರಿಗೊಂದೆರಡು ನಮನ
ಕ್ಷಯ ಮುಕ್ತ ಭಾರತವಾಗಲಿನ್ನು
ಹೌದೆನ್ನೋಣ ನಾವೆಲ್ಲ ಜೊತೆಯಲಿನ್ನು
ರಕ್ಷಣೆಗಾಗಿ ಕೈಜೋಡಿಸಿ ದುಡಿಯೋಣವಿನ್ನು
ಬಯಸಿ ವಿಶ್ವದಾರೋಗ್ಯ ಭಾಗ್ಯಕಿನ್ನು
**ಗುಲಾಬಿ ಕಡ್ಡಿಗಳು Acid Fast Bacilli - Pink Rod like structures
ಪ್ರಾಧ್ಯಪಕರು ಹಾಗೂ ಮುಖ್ಯಸ್ಥರು
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ